ಪಂಚಾಂಗ ಮುಹೂರ್ತದಲ್ಲಿ ಬರುವ ರಾಹುಕಾಲ, ಗುಳಿಕಕಾಲ ಹಾಗೂ ಯಮಗಂಡಕಾಲ ಇವುಗಳ ಬಗ್ಗೆ ಮಾಹಿತಿ:
ಪಂಚಾಂಗ ಮುಹೂರ್ತದಲ್ಲಿ ಬರುವ ರಾಹುಕಾಲ, ಗುಳಿಕಕಾಲ ಹಾಗೂ ಯಮಗಂಡಕಾಲ ಇವುಗಳ ಬಗ್ಗೆ ಮಾಹಿತಿ:
ನಮ್ಮ ಸನಾತನ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಸತ್ಕಾರ್ಯಗಳಿಗೂ ಶುಭ ಮುಹೂರ್ತ ನೋಡುವ ಅತಿಪ್ರಾಚೀನ ವಾಡಿಕೆ ಇದೆ. ಇಂದಿಗೂ ಮದುವೆ ಉಪನಯನ ಗ್ರಹಪ್ರವೇಶ ಮುಂತಾದ ಎಲ್ಲಾ ಶುಭಕಾರ್ಯಗಳಿಗೆ ಸ್ಥಿರವಾದ ಒಳ್ಳೆಯ ಶುಭಮೂಹೂರ್ತವನ್ನು ನೋಡುತ್ತಾರೆ.
ವಾರ, ತಿಥಿ, ನಕ್ಷತ್ರ, ಯೋಗ ಹಾಗೂ ಕರಣ ಎಂಬ ದೈನಂದಿನ ಕಾಲದ ಪಂಚ ಅಂಗಗಳಿಂದ ಕೂಡಿದ್ದೇ ಪಂಚಾಂಗವೆನಿಸಿದೆ. ನವಗ್ರಹಗಳ ಚಲನವಲನಗಳನ್ನಾಧರಿಸಿ ಪಂಚಾಂಗ ನಿರ್ಣಯ ಮತ್ತು ಜ್ಯೋತಿಷ್ಯ ಶಾಸ್ತ್ರ ನೆಲೆಯೂರಿದೆ. ಅಂತಹ ಒಂಬತ್ತು ಗ್ರಹಗಳಿಗೂ ಒಂದೊಂದು ಉಪಗ್ರಹಗಳಿವೆ. ಅದರಲ್ಲಿಯೂ ಮುಖ್ಯವಾಗಿ ಗುರು ಗ್ರಹಕ್ಕೆ ಯಮ ಗಂಡಕ, ಶನಿಗ್ರಹಕ್ಕೆ ಗುಳಿಕ ಹಾಗೂ ರಾಹುಗ್ರಹಕ್ಕೆ ವ್ಯತಿಪಾತ ಎಂಬ ಉಪಗ್ರಹಗಳಿವೆ. ಈ ಗ್ರಹ, ಉಪಗ್ರಹಗಳ ಚಲನೆಯನ್ನೇ ಕ್ರಮವಾಗಿ ರಾಹá-ಕಾಲ ಯಮಗಂಡಕಾಲ ಹಾಗೂ ಗುಳಿಕ ಕಾಲವೆಂದು ಕರೆದಿದ್ದಾರೆ.
ರಾಹುಕಾಲ:
ಯಾರು ಈ ರಾಹು?ಸಮುದ್ರಮಥನ ಕಾಲದಲ್ಲಿ ಭಗವಂತನೇ ಮೋಹಿನಿ ರೂಪದಲ್ಲಿ ಬಂದು ಅಮೃತದ ಹಂಚá-ವಿಕೆಯನ್ನು ನಡೆಸಿದಾಗ, ರಾಹು ಮೋಸದಿಂದ ಬಂದು ಅಮೃತವನ್ನು ಸ್ವೀಕರಿಸಿದ. ಇದನ್ನು ಸೂರ್ಯ ಚಂದ್ರರಿಬ್ಬರೂ ಕಂಡು ದೇವರಿಗೆ ತಿಳಿಸá-ತ್ತಾರೆ. ತಕ್ಷಣವೇ ಮೋಹಿನಿ ರೂಪದಲ್ಲಿದ್ದ ಭಗವಂತ ರಾಹá-ವಿನ ಶಿರಚ್ಛೇದನ ಮಾಡುತ್ತಾನೆ. ಆ ಕೋಪದಿಂದಲೇ ರಾಹು ಸೂರ್ಯ ಚಂದ್ರರ ತೇಜಸ್ಸನ್ನು ಆಗಾಗ ಹರಣ ಮಾಡುತ್ತಾನೆ. ಅಥವಾ ಅಪಹಾರ ಮಾಡುತ್ತಾನೆ. ಅದನ್ನೇ ಗ್ರಹಣ ಎಂದು ಕರೆಯುತ್ತಾರೆ. ‘ರವ್ಯಾದಿ ಸಪ್ತವಾರೇಷು ಅಶ್ವಗತ್ಯಾ ವಾಮಾವರ್ತೆನ ಯಮಾರ್ಧಂ ಪ್ರಾಪ್ಯ ಸಪ್ತದಿಕ್ಷು ರಾಹೋರ್ಗಮನಂ ರಾಹುಕಾಲಃ ಇತ್ಯುಚ್ಯತೇ ಬುಧೈಃ’ - ವಾರದ ಪ್ರತಿನಿತ್ಯವೂ ರಾಹುವು ಕುದುರೆಯಂತೆ ವೇಗವಾಗಿ ವಾಮ ಮಾರ್ಗವಾಗಿ ಅಂದರೆ ಹಿಮ್ಮುಖವಾಗಿ ಚಲಿಸುತ್ತಾನೆ. ಒಂದೊಂದು ದಿನವೂ ಒಂದೊಂದು ದಿಕ್ಕಿನಲ್ಲಿ ಸಂಚರಿಸುತ್ತಾನೆ. ಪ್ರತಿದಿನವೂ ಈ ಸಂಚಾರದ ಸಮಯ ಒಂದೂವರೆ ಗಂಟೆ (90 ನಿಮಿಷ) ಕಾಲ ಇರುತ್ತದೆ. ಪ್ರತಿ ದಿನವೂ ಬೇರೆ ಬೇರೆ ಸಮಯದಲ್ಲಿ ಈ ಕಾಲ ಬರುತ್ತದೆ. ಈ ಸಮಯವನ್ನೇ ರಾಹುಕಾಲ ಎಂದು ಕರೆದಿದ್ದಾರೆ. ಕೆಲವರು ಇದನ್ನು ವಿಷಘಳಿಗೆ ಅಂತಲೂ ಹೇಳುತ್ತಾರೆ. ಈ ಸಮಯದಲ್ಲಿ ಯಾವ ಕೆಲಸ ಕಾರ್ಯಗಳನ್ನು ಮಾಡಬಾರದೆಂದು ತಿಳಿಸಿದ್ದಾರೆ. ಸೂರ್ಯೋದಯ ಸೂರ್ಯಾಸ್ತ ಗಳಿಗೆ ಅನುಗುಣವಾಗಿ ಆಯಾ ದೇಶಗಳಲ್ಲಿ ಸಮಯ ಬದಲಾಗುತ್ತದೆ. ಆದರೆ ಹಿಂದೂ ಪಂಚಾಂಗ ರೀತ್ಯಾ ಭಾರತ ದೇಶದಲ್ಲಿ ಸಾಮಾನ್ಯವಾಗಿ ಯಾವಾಗಲೂ ಒಂದೇ ಸಮಯವಿರುತ್ತದೆ. ರಾಹು ದೋಷದ ನಿವಾರಣೆಗೆ ವಿಶೇಷವಾಗಿ ದುರ್ಗಾದೇವಿಯ ಆರಾಧನೆ ಬಹಳ ಉತ್ತಮ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
ಗುಳಿಕಕಾಲ:
ಶನಿಯ ಉಪಗ್ರಹವನ್ನು ಗುಳಿಕ ಅಥವಾ ಮಾಂದಿ ಎಂದು ಕರೆಯುತ್ತಾರೆ. ಪ್ರಾಚೀನರು ಗುಳಿಕನನ್ನು ಶನಿಯ ಪುತ್ರನೆಂದೇ ಕರೆದಿದ್ದಾರೆ. ಪ್ರಶ್ನೆ ಶಾಸ್ತ್ರದಲ್ಲಿ ಗುಳಿಕನಿಗೆ ಒಂದು ವಿಶಿಷ್ಟ ಸ್ಥಾನವಿದೆ. ಎಲ್ಲ ಉಪಗ್ರಹಗಳಲ್ಲಿ ಗುಳಿಕ ಅತೀ ದೋಷಕಾರಕನಾಗಿ ಫಲ ನೀಡುವವನೆಂದಿದ್ದಾರೆ. - ಶುಭ ಸಮಾರಂಭ ಕಾಲಗಳಲ್ಲಿ ಗುಳಿಕ ಕಾಲವನ್ನು ತ್ಯಜಿಸಲೇಬೇಕು. ಗುಳಿಕ ಕಾಲದಲ್ಲಿ ಮಾಡಿದ ಕಾರ್ಯಗಳು ನಿಷ್ಪಲ ಹೊಂದುತ್ತವೆ ಎಂದು ತಿಳಿಸಿದ್ದಾರೆ.
ಗಮನಿಸಿ: ಗುಳಿಕಕಾಲದಲ್ಲಿ ಮಾಡಿದ ಕೆಲಸ ಪುನಃ ಮರುಕಳಿಸುತ್ತದೆ ಎಂಬ ನಂಬಿಕೆಯಲ್ಲಿ ಚಿನ್ನ, ಬೆಳ್ಳಿ ಅಥವಾ ಇತರೇ ಖರೀದಿಸಲು ಉತ್ತಮವಾಗಿದೆ ಅಷ್ಟೇ.
ಯಮಗಂಡಕಾಲ:
ಇದು ಯಮನಿಗೆ ಸಂಬಂಧಿಸಿದ ಕಾಲ. ಈ ಕಾಲದಲ್ಲಿಯೂ ಶುಭ ಕಾರ್ಯವನ್ನು ಮಾಡಬಾರದು ಎಂದಿದ್ದಾರೆ. ಈ ಯಮಗಂಡ ಕಾಲವು ಸಹ ಪ್ರತಿದಿನ ಒಂದೂವರೆ ಗಂಟೆ (90 ನಿಮಿಷ) ಇರುತ್ತದೆ. ಯಮ ಮೃತ್ಯು ದೇವತೆ ಎನಿಸುತ್ತಾನೆ. ಕಲಹಗಳು, ಬೇಡವಾದ ಕಾರ್ಯ ಅಂತ್ಯಗೊಳಿಸಲು ಈ ಕಾಲ ಉತ್ತಮ ಸಮಯವೆನಿಸಿದೆ. ಯಾವುದೇ ಕಾರ್ಯಗಳಿಗೂ ಅಂತ್ಯಗಾಣಿಸುವವನು ಯಮ. ಇದು ಯಮನಕಾಲವಾದ್ದರಿಂದ ಯಾವುದೇ ಮಂಗಳ ಕಾರ್ಯ ಮಾಡಬಾರದು. ಆದ್ದರಿಂದ ಯಾವುದೇ ವಿವಾದಾಸ್ಪದ ವಿಷಯ ಅಂತ್ಯಗೊಳಿಸಲು ಈ ಯಮನಕಾಲ ಒಳ್ಳೆಯ ಸಮಯವೆನಿಸಿದೆ.
ಗಮನಿಸಿ: ಅನಿಷ್ಟ ಕಾಲ ವೆನಿಸಿದ ರಾಹುಕಾಲ, ಗುಳಿಕಕಾಲ ಹಾಗೂ ಯಮಗಂಡಕಾಲ ಈ ಮೂರು ಕಾಲಗಳು ಸೂರ್ಯೋದಯದ ನಂತರದ ಒಂದೂವರೆ ಗಂಟೆಯೊಳಗೆ ಬಂದರೆ ದೋಷವಿರುವುದಿಲ್ಲ. ಕಾರಣ ಆ ಸಮಯ ಅತೀ ಶುಭಕರವೆಂದು ಭಾವಿಸಲಾಗಿದೆ. ಆದರೆ ಕಾಲನಿಯಾಮಕನಾದ ಮಹಾವಿಷ್ಣುವಿನ ಸ್ಮರಣೆ ಎಲ್ಲ ಅನಿಷ್ಟ ಕಾಲಗಳಿಗೂ ಪರಿಹಾರವೆಂಬುದು ಶಾಸ್ತ್ರಸಿದ್ಧ. ಆದ್ದರಿಂದ ಎಲ್ಲ ಕಾಲದಲ್ಲಿಯೂ ವಿಷ್ಣು ಸಹಸ್ರನಾಮದ ಪಠಣೆ ಎಲ್ಲ ವಿಘ್ನಗಳಿಗೂ ಪರಿಹಾರವಾಗಿದೆ.
ಆರ್. ಶ್ರೀನಾಥ್
ಜ್ಯೋತಿಷ್ಯರು, ವಾಸ್ತು ಶಾಸ್ತ್ರಜ್ಞರು
ಪುರೋಹಿತರು, ಹೊಸೂರು
+91 95977 48182



